Thursday, 13 March 2014

ಒಂದು  ಸುಂದರ ಸೂರ್ಯಾಸ್ತ .......
ಮೂಡಣದಲ್ಲಿ ಸೂರ್ಯ ಉದಯಿಸುವಾಗ ಕಂಡೆ ನೀನು
ನಿನ್ನ ನೋಡಿ ಬಳಿ  ಬರಬೇಕೆಂದು ಹೊರಟೆ ನಾನು
ಬಳಿ ಬರುವಷ್ಟರಲ್ಲಿ ನೆತ್ತಿಯ ಮೇಲೆ ಬಂದಿದ್ದ ಸೂರ್ಯ .....
ನಿನ್ನ ಮುಖವಾಗಿತ್ತು ಕಾದ ಕಬ್ಬಿಣದಂತೆ ಕಡು ಕೆಂಪು
ನಾನಂದುಕೊಂಡೆ ಅದು ನನ್ನ ಮೇಲಿನ ಕೋಪಕ್ಕೆ ಎಂದು
ಆದರೆ ಸೂರ್ಯ ಮುಳುಗುವಾಗಲೇ ಅರಿವಿಗೆ ಬಂದದ್ದು
ನಿನ್ನ ಮೊಗವು ಕೆಂಪಾಗಿದ್ದು ಬಿಸಿಲ ಬೇಗೆಯಿಂದ  ಕೊಪದಿಂದಲ್ಲ ಎಂದು ...
ಕೊನೆಗೆ ಬಳಿ ಬಂದು ಹೇಳಿದೆ ಸುಂದರ  ಸೂರ್ಯಾಸ್ತವ ನೋಡೋಣ ಬಾ ಎಂದು


ರೂಪದರ್ಶಿ -: ನೇತ್ರಾ ಭಟ್ಟ    (ಒಂದು ಸಾಂದರ್ಭಿಕ ಚಿತ್ರ )